ಗಾರ್ಡನ್ ಸಿಟಿ ವಿಶ್ವವಿದ್ಯಾಲಯವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ 16–21 ವರ್ಷದ ಯುವ ಪ್ರತಿಭೆಗಳನ್ನು ಗುರುತಿಸಿ ಸತ್ಕರಿಸುವ ಉದ್ದೇಶದಿಂದ “ಕನ್ನಡ ಚಿಗುರು ಪ್ರಶಸ್ತಿ – 2025” ಅನ್ನು ಘೋಷಿಸಿದೆ. ಕರ್ನಾಟಕದ ವಿವಿಧ ಭಾಗಗಳಿಂದ 20 ವಿದ್ಯಾರ್ಥಿಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ.
ಕನ್ನಡದ ಸಾಂಸ್ಕೃತಿಕ ಕಾರ್ಯಗಳು, ಸಾಹಿತ್ಯ ರಚನೆ, ಸಮಾಜಮುಖಿ ಜಾಗೃತಿ ಚಟುವಟಿಕೆಗಳು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಯುವಕರನ್ನು ಉತ್ತೇಜಿಸುವುದು ಪ್ರಶಸ್ತಿಯ ಪ್ರಮುಖ ಉದ್ದೇಶವಾಗಿದೆ. ಈ ಪ್ರಶಸ್ತಿಯಡಿ 10 ಮುಖ್ಯ ವಿಜೇತರಿಗೆ ತಲಾ ರೂ.10,000 ನಗದು ಬಹುಮಾನ ಮತ್ತು 10 ಪ್ರೋತ್ಸಾಹ ವಿಜೇತರಿಗೆ ತಲಾ ರೂ.5,000 ನಗದು ಬಹುಮಾನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ತಮ್ಮ ಕನ್ನಡ ಸೇವೆಗಳ ದೃಢೀಕರಣ ದಾಖಲೆಗಳು, 2 ನಿಮಿಷಗಳ ವಿವರಣಾತ್ಮಕ ವೀಡಿಯೋ ಹಾಗೂ ಕಾಲೇಜು/ಶಾಲೆಯ ಪ್ರಾಂಶುಪಾಲರು ಅಥವಾ ಜಿಲ್ಲಾಮಟ್ಟದ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳಿಂದ ಶಿಫಾರಸು ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಎಲ್ಲಾ ದಾಖಲೆಗಳನ್ನು kannadachiguru@gcu.edu.in ಈ ಅಧಿಕೃತ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಅಂತಿಮ ವಿಜೇತರಿಗೆ ಆಯ್ಕೆ ಮಾಡುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 9.
ಹೆಚ್ಚಿನ ಮಾಹಿತಿಗಾಗಿ:
ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ಬೆಂಗಳೂರು
ಪ್ರೋ. ಅಶ್ವಿನಿ ಎಸ್ – 7899451225
ಪ್ರೋ. ಇಂದ್ರಜ ಎಲ್ ಎಂ – 9632805831





